ಉಲ್ಲಾಸ ಉತ್ಸಾಹವು 2010 ರ ಕನ್ನಡ ಭಾಷೆಯ ಪ್ರಣಯ ಚಲನಚಿತ್ರವಾಗಿದ್ದು, ಇದನ್ನು ದೇವರಾಜ್ ಪಾಲನ್ ನಿರ್ದೇಶಿಸಿದ್ದಾರೆ, ಇದರಲ್ಲಿ ಗಣೇಶ್ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ (ಇಲ್ಲಿಯವರೆಗೆ ಇದು ಈಕೆಯ ಏಕೈಕ ಕನ್ನಡ ಚಲನಚಿತ್ರವಾಗಿದೆ). ಈ ಚಿತ್ರದ ಮೂಲಕ ಗಣೇಶ್ ಅವರ ಪತ್ನಿ ನಿರ್ಮಾಪಕಿಯಾದರು. 2008 ರ ತೆಲುಗು ಚಲನಚಿತ್ರ ಉಲ್ಲಾಸಂಗ ಉತ್ಸಾಹಂಗದ ರಿಮೇಕ್, ಇದು ನಾಲ್ಕು ತಿಂಗಳ ವಿಳಂಬದ ನಂತರ ಬಿಡುಗಡೆಯಾಯಿತು. == ಕಥಾವಸ್ತು == ಪ್ರೀತಮ್ ಎಂಬ ಬೇಜವಾಬ್ದಾರಿ ಯುವಕ ಮಹಾಲಕ್ಷ್ಮಿಗೆ ಮರುಳಾಗಿ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿರುವ ಮಹಾಲಕ್ಷ್ಮಿ ಅಂತಿಮವಾಗಿ ತನ್ನ ಆ ಪ್ರಿಯಕರನನ್ನು ಭೇಟಿಯಾಗಲು ಕರೆದುಕೊಂಡು ಹೋಗುವಂತೆ ಪ್ರೀತಮನಿಗೆ ಕೇಳಿಕೊಳ್ಳುತ್ತಾಳೆ. == ಪಾತ್ರವರ್ಗ == ಪ್ರೀತಂ ಪಾತ್ರದಲ್ಲಿ ಗಣೇಶ್ ಮಹಾಲಕ್ಷ್ಮಿಯಾಗಿ ಯಾಮಿ ಗೌತಮ್ ರಂಗಾಯಣ ರಘು ಸಾಧು ಕೋಕಿಲ ಶರಣ್ ರಂಗಾಯಣ ರಘು ಕವಿತಾ ತುಳಸಿ ಸಿಹಿ ಕಹಿ ಚಂದ್ರು ವಿತಿಕಾ ಶೇರು ಮಿತ್ರ == ನಿರ್ಮಾಣ == ಬಾಲಿವುಡ್ ನಟಿ ಯಾಮಿ ಗೌತಮ್ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. == ಧ್ವನಿಮುದ್ರಿಕೆ == == ಸ್ವೀಕಾರ == ಟೈಮ್ಸ್ ಆಫ್ ಇಂಡಿಯಾ "ಮೊದಲಾರ್ಧವು ರೋಮಾಂಚನಕಾರಿಯಾಗಿದ್ದರೂ, ದ್ವಿತೀಯಾರ್ಧವು ಭಾವನೆಗಳು, ಪ್ರಣಯ ಮತ್ತು ಹಾಸ್ಯದ ಅತ್ಯುತ್ತಮ ಮಿಶ್ರಣವಾಗಿದೆ" ಎಂದು ಹೇಳಿದೆ. ಬೆಂಗಳೂರು ಮಿರರ್ ಹೇಳುವಂತೆ, " ಚೆನ್ನಾಗಿ ರಚಿಸಿದ ಕಥಾಹಂದರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ಮತ್ತು ಅದರಲ್ಲಿನ ಪರಿಣಾಮಕರಿ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಅನುಕೂಲ ಮಾಡಿವೆ". " ಈಗಾಗಲೇ ಮೂಲವನ್ನು ವೀಕ್ಷಿಸಿದ್ದವರು ಗಣೇಶ್ ಅವರ ಕಟ್ಟಾ ಅಭಿಮಾನಿಯಾಗಿರದಿದ್ದರೆ ನೋಡುವ ಅಗತ್ಯವಿಲ್ಲ" ಎಂದು ಸಿಫಿ ಹೇಳಿತು. ಉಲ್ಲಾಸ ಉತ್ಸಾಹ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಉಲ್ಲಾಸ ಉತ್ಸಾಹ @ ಐ ಎಮ್ ಡಿ ಬಿ